Advertisment

Video: ಕಾಂತಾರ ಶೂಟಿಂಗ್​ ಯಾವಾಗ? ಈ ಬಾರಿ ಬಜೆಟ್​ ಎಷ್ಟು? ರಿಷಬ್​ ಶೆಟ್ಟಿ ಹೇಳಿದ್ದಾರೆ ಕೇಳಿ

author-image
AS Harshith
Updated On
Video: ಕಾಂತಾರ ಶೂಟಿಂಗ್​ ಯಾವಾಗ? ಈ ಬಾರಿ ಬಜೆಟ್​ ಎಷ್ಟು? ರಿಷಬ್​ ಶೆಟ್ಟಿ ಹೇಳಿದ್ದಾರೆ ಕೇಳಿ
Advertisment
  • ಕಾಂತಾರ ಚಿತ್ರಕ್ಕೆ ಅಜನೀಶ್ ಗೋಯಲ್ ಸಂಗೀತ
  • ಹೊಸ ಕಲಾವಿದರಿಗೆ ಅವಕಾಶ ಕೊಡಲಿರುವ ರಿಷಬ್ ಶೆಟ್ಟಿ
  • ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್.. ಶೂಟಿಂಗ್​ ಯಾವಾಗ ಗೊತ್ತಾ?

ಉಡುಪಿ: ಕಾಂತಾರ ಮೊದಲ ಅಧ್ಯಾಯದ ಫಸ್ಟ್​ ಲುಕ್​ ರಿಲೀಸ್​ ಆಗಿದೆ. ರಿಲೀಸ್​ ಬೆನ್ನಲ್ಲೇ ಚಿತ್ರತಂಡ ಉಡುಪಿಯ ಆನೆಗುಡ್ಡೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರೆವೇರಿಸಿದ್ದಾರೆ. ಪೂಜೆ ಬಳಿಕ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಮಾದ್ಯಮದವರೊಂದಿಗೆ ಮಾತನಾಡಿದ್ದಾರೆ.

Advertisment


">November 27, 2023

ಮಾದ್ಯಮದವರೊಂದಿಗೆ ಮಾತನಾಡಿದ ರಿಷಬ್​ ಶೆಟ್ಟಿ, ವಿಜಯ್ ಕಿರಗೊಂದೂರು ದೊಡ್ಡ ಶಕ್ತಿ. ಇಡೀ ದೇಶದಲ್ಲಿ ಅವರು ಒಂದು ಪವರ್ ಹೌಸ್. ಕಾಂತಾರ ಈ ಮಟ್ಟಕ್ಕೆ ಹೋಗಲು ಅವರ ಬೆಂಬಲ ಬಹಳ ದೊಡ್ಡದು. ಕಾಂತಾರ ಚಿತ್ರಕ್ಕೆ ಅವರು ಸಂಪೂರ್ಣವಾಗಿ ಬೆಂಬಲ ಕೊಟ್ಟಿದ್ದಾರೆ. ಇಡೀ ಚಿತ್ರಕ್ಕೆ ಅವರು ದೊಡ್ಡ ಕಾನ್ಫಿಡೆನ್ಸ್ ಅನ್ನು ತುಂಬಿದ್ದಾರೆ. ಒಂದು ಚಿತ್ರಕ್ಕೆ ನಾವು ಇಂತಿಷ್ಟು ಬಜೆಟ್ ನಿರ್ಧಾರ ಮಾಡಿರುತ್ತೇವೆ. ಅದು ಮುಂದೆ ಎಲ್ಲೋ ಹೋಗಿ ತಲುಪುತ್ತದೆ. ಕಾಂತಾರ ಮೊದಲ ಅಧ್ಯಾಯ ಕಥೆ ಅಪೇಕ್ಷೆ ಮಾಡುತ್ತದೆ ಅದಕ್ಕೆ ನಿರ್ಮಾಪಕರು ಪೂರ್ಣ ಸಹಕಾರ ಕೊಟ್ಟಿದ್ದಾರೆ. ನಮ್ಮ ನಡುವೆ ಒಳ್ಳೆಯ ಭಾಂದವ್ಯ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

Advertisment


">November 27, 2023


">November 27, 2023

ಅಜನೀಶ್ ಗೋಯಲ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ತಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ನಾವು ಮಾಡಿಕೊಂಡಿಲ್ಲ. ಕೆಲ ಹೊಸ ಕಲಾವಿದರು ಬರುತ್ತಾರೆ. ಮುಂದಿನ ತಿಂಗಳು ಶೂಟಿಂಗ್ ಮಾಡುವ ಆಲೋಚನೆ ಇದೆ. ಚಿತ್ರದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದೆ ಎಂದು ಕುಂಭಾಸಿಯಲ್ಲಿ ನಟ ರಿಷಬ್ ಶೆಟ್ಟಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment